Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಸಂಸಾರದಲ್ಲಿ ಗೋಲ್ಮಾಲ್` ಸೆನ್ಸಾರ್ ಪ್ರಶಂಸೆ
Posted date: 17 Tue, Jul 2012 ? 06:07:27 PM

ಹೆಸರಾಂತ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ನಕ್ಕು ನಲಿಸುವುದರ ಜೊತೆಗೆ ಸಾಮಾಜಿಕ ಕಾಲಳಿಯನ್ನು ಬಿಂಬಿಸುವ ‘ಸಂಸಾರದಲ್ಲಿ ಗೋಲ್ಮಾಲ್’ ಚಿತ್ರ ಪ್ರದೇಶಿಕ ಸೆನ್ಸಾರ್ ಮಂಡಳಿಯಿಂದ ‘ಯು’ ಅರ್ಹತಾ ಪತ್ರ ಪಡದು ಪ್ರಶಂಸೆಯನ್ನು ಸಹ ಪಡೆದುಕೊಂಡಿದೆ.
ಹಾಸ್ಯ, ನವಿರಾದ ಪ್ರೇಮ ಕಥೆ, ಭಕ್ತಿ ಪ್ರಧಾನ ಹಾಗೂ ಭಾವನಾತ್ಮಕ ಸಿನೆಮಾ ನಿರ್ದೇಶನ ಮಾಡುವುದರಲ್ಲಿ ಪಾರಂಗತರಾಗಿರುವ ಓಂ ಸಾಯಿಪ್ರಕಾಶ್ ಅವರು ಬಹಳ ವರ್ಷಗಳ ಬಳಿಕ ಹಾಸ್ಯ ಮಿಶ್ರಿತ ಸಾಂಸಾರಿಕ ಚಿತ್ರ ನಿರ್ದೇಶನ ಮಾಡಿರುವರು.  ಪ್ರಭಾಕರ್ ರೆಡ್ಡಿ ಈ ಹಿಂದೆ ‘ಮೂರನೇಕ್ಲಾಸ್ ಮಂಜ ಬಿಕಾಂ ಭಾಗ್ಯ’ ಚಿತ್ರ ನಿರ್ಮಿಸಿದವರು ಈ ಚಿತ್ರಕ್ಕೆ ಹೆಸರಾಂತ ತೆಲುಗು ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಅವರ ತೆಲುಗು ಚಿತ್ರ ‘ಆದಿ ವಾರಂ ಅಡವಾಡಿಕೆ  ಸೇಲ್ವಮ್ ಕಾವಲಿ’ ಚಿತ್ರದ ಸ್ಪೂರ್ತಿ ಇಂದ ‘ಸಂಸಾರದಲ್ಲಿ ಗೋಲ್ಮಾಲ್’ ಚಿತ್ರ ತಯಾರಿಸಿದ್ದಾರೆ.
ಗೋಲ್ಮಾಲ್ ಸೀರೀಸ್ಗಳಿಗೆ ಪ್ರಸಿದ್ದರಾದ ಓಂ ಸಾಯಿಪ್ರಕಾಶ್ ಅವರು ಐದು ಸತಿ ಪತಿಗಳ ಕಿತಾಪತಿ ಸಂಸಾರದಲ್ಲಿ ಹ್ಯಾಗಿರುವುದಾಗಿ ತೆರೆಯಮೇಲೆ ಹೇಳಲಿದ್ದಾರೆ.
ಐದು ಸತಿ ಪತಿಗಳಾಗಿ - ಉಮಾಶ್ರೀ - ರಾಜು ತಾಳಿಕೋಟೆ, ಮೋಹನ್ - ಅನು ಪ್ರಭಾಕರ್, ಸಿಹಿಕಹಿ ಚಂದ್ರು - ತಾರಾ, ತಬಲಾ ನಾಣಿ - ಲಕ್ಷ್ಮಿ ಭಾಗವತರ್, ಸಾಧು ಕೋಕಿಲ - ನಯನ ಕೃಷ್ಣ ಅಭಿನಯಿಸಿದ್ದಾರೆ. ಮಲಯಾಳಂ ನಟಿ ಶಕೀಲಾ ಸಹ ತಾರಗಣದಲ್ಲಿದ್ದಾರೆ.
ಈ ಚಿತ್ರದ ಸಂಗೀತ ನಿರ್ದೇಶಕ ಸಾಧು ಕೋಕಿಲ ಒಂದು ಚೌಚೌ ಹಾಡಿಗೆ 20 ಕನ್ನಡ ಸಿನಿಮಾ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಎಂ ಎಸ್ ರಾಜು ಅವರ ಸಂಕಲನ, ಹಂಸಲೇಖ ಹಾಗೂ ಕವಿರಾಜ್ ಅವರ ಸಾಹಿತ್ಯ, ರವಿ ಅವರ ಸಂಭಾಷಣೆ ‘ಸಂರದಲ್ಲಿ ಗೋಲ್ಮಾಲ್’ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಸಂಸಾರದಲ್ಲಿ ಗೋಲ್ಮಾಲ್` ಸೆನ್ಸಾರ್ ಪ್ರಶಂಸೆ - Chitratara.com
Copyright 2009 chitratara.com Reproduction is forbidden unless authorized. All rights reserved.